ಹಣಕಾಸಿನ ವಿಚಾರಕ್ಕೆ ಚಾಕು ಇರಿತ – ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೆ ಶರಣು
ಧಾರವಾಡ: ಹಾವೇರಿ ಪೇಟೆಯ ಕಂಠಿಗಲ್ಲಿಯಲ್ಲಿ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚಾಕು ಇರಿತದ ಘಟನೆ ಈಗ ಜಿವಿತ ಹರಣದ ಘಟ್ಟ ತಲುಪಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾನೆ.
ಸಾವಿಗೀಡಾದ ಯುವಕನನ್ನು ಕಂಠಿಗಲ್ಲಿಯ ನಿವಾಸಿ ರಾಘವೇಂದ್ರ ಗಾಯಕವಾಡ (26) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ನಡೆದ ಚಾಕು ಇರಿತದ ಘಟನೆ ಬಳಿಕ ತಕ್ಷಣವೇ ಧಾರವಾಡದ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.
ಆದರೂ ಆತನ ಸ್ಥಿತಿ ಗಂಭೀರವಾಗಿದ್ದರಿಂದ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಜೀವ ಕಳೆದುಕೊಂಡಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಹಣಕಾಸಿನ ಲೆಕ್ಕಪತ್ರ ಮತ್ತು ವೈಯಕ್ತಿಕ ತಕರಾರು ಈ ದಾಳಿಗೆ ಕಾರಣವಾಯಿತೆಂಬ ಅನುಮಾನವಿದೆ.
ಸ್ಥಳೀಯರು ಘಟನೆಯನ್ನು ಖಂಡಿಸಿ ಆರೋಪಿಗಳನ್ನು ಬೇಗನೇ ಬಂಧಿಸಲು ಒತ್ತಾಯ ವ್ಯಕ್ತಪಡಿಸಿದ್ದಾರೆ. ಘಟನೆ ಸ್ಥಳದಲ್ಲಿ ಭದ್ರತಾ ವ್ಯವಸ್ಥೆ ಗಟ್ಟಿಯಾಗಿಸಲಾಗಿದೆ.

Comments
Post a Comment